ಗುಲಾಬ್ ಜಾಮೂನು:

ಬೇಕಾಗುವ ಸಾಮಗ್ರಿಗಳು:
ಸಕ್ಕರೆ 1/4 ಕೆಜಿ
ಎಣ್ಣೆ
ಜಾಮೂನು ಪೌಡರ್
ಎಲ್ಲಕ್ಕಿ 2-3

ಮಾಡುವ ವಿಧಾನ:

 1. ಒಂದು ಪಾತ್ರೆಯಲ್ಲಿ ನೀರು ಹಾಕಿ ನಂತರ ಸಕ್ಕರೆ ಹಾಕಿ ಪಾಕ ಮಾಡಿಕೊಳ್ಳಿ.
 2. ಒಂದು ಪಾತ್ರೆಗೆ ಜಾಮೂನಿನ ಪೌಡರ್ ಹಾಕಿ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಕಲಸಿಕೊಳ್ಳಿ.
  ಅದನ್ನು 10 ನಿಮಿಷ ಕಾಲ ಮುಚ್ಚಿ ಹಿಡಿ.
 3. ನಂತರ ಚಿಕ್ಕ ಚಿಕ್ಕ ಉಂಡೆಮಾಡಿ ಹಿಟ್ಟುಕೊಳ್ಳಿ.
 4. ಎಣ್ಣೆಯನ್ನು ಕಾಯಿಕೊಳ್ಳಿ.
 5. ಕಾದ ಎಣ್ಣೆಯಲ್ಲಿ ಒಂದೊದಾಗಿ ಹಾಕಿ ಕಂದು ಬಣ್ಣ ಬರುವವರೆಗೆ ಕರೆದುಕೊಳ್ಳಿ.
 6. ಕರಿದಜಮೂನನ್ನು ಸಕ್ಕರೆ ಪಾಕದಲ್ಲಿ ಹಾಕಿ 15 ನಿಮಿಷ ಬಿಡಿ ನಂತರ ಜಾಮೂನು ತಿನ್ನಲು ರೆಡಿ.

ಸೀಮೆ ಬದನೆಕಾಯಿ ಪಲ್ಯ:

ಬೇಕಾಗುವ ಸಾಮಗ್ರಿಗಳು:

ಸೀಮೆ ಬದನೆಕಾಯಿ 2
ಹಸಿಮೆಣಸಿನಕಾಯಿ 3-4
ಸಾಸಿವೆ 1 ಚಮಚ
ಜೀರಿಗೆ 1 ಚಮಚ
ಎಣ್ಣೆ 3-4 ಚಮಚ
ಕರಿಬೇವು 7-8
ಈರುಳ್ಳಿ 1
ಕೊತ್ತಂಬರಿಸೊಪ್ಪು ಸ್ವಲ್ಪ
ಉಪ್ಪು ರುಚಿಗೆ

ಮಾಡುವ ವಿಧಾನ:

 1. ಈರುಳ್ಳಿ, ಹಸಿಮೆಣಸಿನಕಾಯಿ, ಸೀಮೆಬದನೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
 2. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಸಾಸಿವೆ, ಜೀರಿಗೆ, ಈರುಳ್ಳಿ ಹಾಕಿ ಬಾಡಿಸಿ ಆಮೇಲೆ ಕರಿಬೇವು, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ. ನಂತರ ಸೀಮೆಬದನೆಕಾಯಿ ಹಾಕಿ ಬೇಯಿಸಿಕೊಳ್ಳಿ. ಆಮೇಲೆ ಉಪ್ಪು ಹಾಕಿ ಬಾಡಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ಪಲ್ಯ ತಿನ್ನಲು ರೆಡಿ.

ಮಸಾಲ ಮಜ್ಜಿಗೆ:

ಬೇಕಾಗುವ ಸಾಮಗ್ರಿಗಳು:

ಮಜ್ಜಿಗೆ 4 ಲೋಟ
ಹಸಿಮೆಣಸಿನಕಾಯಿ 2
ಕೊತ್ತಂಬರಿಸೊಪ್ಪು ಸ್ವಲ್ಪ
ಶುಂಟಿ ಸ್ವಲ್ಪ
ಉಪ್ಪು ರುಚಿಗೆ

ಮಾಡುವ ವಿಧಾನ:

 1. ಒಂದು ಬೋಲ್ನಲ್ಲಿ ಮಜ್ಜಿಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಚಜ್ಜಿದ ಶುಂಟಿ, ಉಪ್ಪು ಹಾಕಿ ಕಲಸಿದರೆ ಮಸಾಲ ಮಜ್ಜಿಗೆ ರೆಡಿ.

ಕೋಸಂಬರಿ:

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ 1/4 ಲೋಟ
ಸೌತೆಕಾಯಿ 1
ಹಸಿಮೆಣಸಿನಕಾಯಿ 2-3
ನಿಂಬೆಹಣ್ಣು 1
ಕೊತ್ತಂಬರಿಸೊಪ್ಪು ಸ್ವಲ್ಪ
ಉಪ್ಪು ರುಚಿಗೆ

ಮಾಡುವ ವಿಧಾನ:

 1. ಒಂದು ಬೌಲ್‌ನಲ್ಲಿ ಹೆಸರುಬೇಳೆಯನ್ನು ನೆನೆಸಿಕೊಳ್ಳಿ.
 2. ಹಸಿಮೆಣಸಿನಕಾಯಿ, ಸೌತೆಕಾಯಿಯನ್ನು ಚಿಕದಾಗಿ ಹಚ್ಚಿಕೊಳ್ಳಿ.
 3. ಒಂದು ಬೌಲ್‌ನಲ್ಲಿ ನೆನೆಸಿದ ಹೆಸರುಬೇಳೆ, ಸೌತೆಕಾಯಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ನಿಂಬೆರಸ ಸ್ವಲ್ಪ, ಉಪ್ಪು ಹಾಕಿ ಮಿಕ್ಸ್ ಮಾಡಿದರೆ ಕೋಸಂಬರಿ ತಿನ್ನಲು ರೆಡಿ.

ಪಾನಕ

ಬೇಕಾಗುವ ಸಾಮಗ್ರಿಗಳು:

ಬೆಲ್ಲ 1
ಹುಣಸೆಹಣ್ಣು ಸ್ವಲ್ಪ
ನಿಂಬೆಹಣ್ಣು 1
ಎಲ್ಲಕ್ಕಿ 2

ಮಾಡುವ ವಿಧಾನ:

 1. ಒಂದು ಬೌಲ್‌ನಲ್ಲಿ ನೀರು ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿ ನಂತರ ಹುಣಸೆಹಣ್ಣಿನ ರಸ, ನಿಂಬೆಹಣ್ಣಿನ ರಸ ಹಾಕಿ ನಂತರ ಎಲ್ಲಕ್ಕಿ ಪೂಪಿ ಹಾಕಿದರೆ ಬೆಲ್ಲದ ಪಾನಕ ಸಿದ್ದ.